ದೇವಗುರು ಬೃಹಸ್ಪತಿಯ ಮಗ ಕಚ. ದಾನವ ಗುರು ಶುಕ್ರಾಚಾರ್ಯ ಮಗಳು ದೇವಯಾನಿ. ದೇವ-ದಾನವರ ಯುದ್ಧದಲ್ಲಿ ದಾನವರು ಸತ್ತಾಗ ಬಳಿ ಸಂಜೀವಿನಿ ವಿದ್ಯೆಯಿದ್ದ ಕಾರಣ ಅದರ ಸಹಾಯದಿಂದ ಸತ್ತ ದಾನವರನ್ನು ಬದುಕಿಸುತ್ತಿದ್ದರು. ದೇವಗುರುವಿಗೆ ಈ ವಿದ್ಯೆ ತಿಳಿಯದ ಕಾರಣ ಅವರು ಒಂದು ತಂತ್ರ ಹೂಡುತ್ತಾರೆ. ಅದರಂತೆ ತನ್ನ ಮಗ ಕಚನಿಗೆ, " ನೀನು ಶುಕ್ರಾಚಾರ್ಯ ಬಳಿಗೆ ಹೋಗು. ದೇವಯಾನಿ ಮತ್ತು ಶುಕ್ರಾಚಾಯರನ್ನು ಪ್ರಸನ್ನಗೊಳಿಸಿ ಅವರೊಂದಿಗಿದ್ದು ಸಂಜೀವಿನಿ ವಿದ್ಯೆಯನ್ನು ಕಲಿತು ಬಾ" ಎಂದರು. ಅಷ್ಟೇ ಅಲ್ಲದೆ ಮೃತಸಂಜೀವಿನಿ ವಿದ್ಯೆಯನ್ನು ಕಲಿತು ಬಂದರೆ ತಮ್ಮೊಂದಿಗೆ ಆತನಿಗೂ ಸಹ ಹವಿರ್ಭಾಗದಲ್ಲಿ ಪಾಲು ಸಿಕ್ಕುತ್ತದೆ ಎಂದು ಆಶ್ವಾಸನೆ ನೀಡಿದರು.
ನಂತರ ದಾನವರ ರಾಜಧಾನಿಯಾದ ವೃಷಪರ್ವಕ್ಕೆ ಬಂದು ಒಂದು ಸಾವಿರ ವರುಷ ಬ್ರಹ್ಮಚಯ ವೃತವನ್ನು ಪಾಲಿಸುವುದಾಗಿ ಶುಕ್ರಾಚಾಯರ ಶಿಷ್ಯನಾದ. ಹಾಡು, ಕುಣಿತ ಮತ್ತು ವಾದ್ಯಗಳಲ್ಲಿ ಪ್ರವೀಣನಾಗಿ ದೇವಯಾನಿಗೂ ಬೇಕಾದವನಾದ. ಆದರೆ ರಾಕ್ಷಸರಿಗೆ ಇತನ ಮೇಲೆ ಸಂಶಯ ಬಂದು ಒಂದು ದಿನ ಕಚನು ದನ ಮೇಯಿಸುತ್ತಿದ್ದಾಗ ಅವನನ್ನು ಕತ್ತರಿಸಿ ನಾಯಿಗಳಿಗೆ ಹಾಕಿದರು. ಆದರೆ ದೇವಯಾನಿ ತಂದೆಯ ಬಳಿ ಹೋಗಿ, " ಆತನಿಲ್ಲದೆ ನಾನು ಬದುಕಿರಲಾರೆ" ಎಂದಾಗ ಶುಕ್ರಾಚಾರ್ಯರು ಅವನನ್ನು ಬದುಕಿಸಿದರು. ಎರಡನೆ ಬಾರಿ ಕಚನನ್ನು ತುಂಡುಮಾಡಿ ಸಮುದ್ರಕ್ಕೆ ಎಸೆದಾಗಲು ಮಗಳ ಕಾರಣದಿಂದ ದಾನವಗುರು ಅವನನ್ನು ಬದುಕಿಸಿದರು. ಮೂರನೆ ಬಾರಿ ಅಸುರರು ಅವನನ್ನು ಕೊಂದದ್ದು ಮಾತ್ರವಲ್ಲದೇ ಅವನ ದೇಹವನ್ನು ಸುಟ್ಟು ಬೂದಿ ಮಾಡಿ ಮದ್ಯದಲ್ಲಿ ಹಾಕಿ ಶುಕ್ರಾಚಾಯರಿಗೇ ಕುಡಿಸಿದರು. ಅವರ ಹೊಟ್ಟೆಯೊಳಗಿಂದಲೇ ಕಚನು ಕೂಗಿದಾಗ ಮತ್ತೆ ದೇವಯಾನಿಯ ಪ್ರಾರ್ಥನೆಯಂತೆ ಆವನನ್ನು ಬದುಕಿಸಿ ಅವರು, " ಇನ್ನು ಮುಂದೆ ಬ್ರಾಹ್ಮಣರು ಮದ್ಯ ಸೇವಿಸಿದರೆ ಅವರಿಗೆ ಬ್ರಾಹ್ಮಣನನ್ನು ಕೊಂದ ಪಾಪ ಬರಲಿ" ಎಂದು ಘೋಷಿಸಿದರು. ನಂತರ ಕಚನು ಆಚೆ ಬಂದು ಮತ್ತೆ ಸೀಳಿದ ಗುರುಗಳ ಹೊಟ್ಟೆಯನ್ನು ಸರಿಪಡಿಸಿದ. ಮುಂದೆ ಒಂದು ಸಾವಿರ ವರುಷ ಅವರೊಂದಿಗಿದ್ದು ಸಂಜೀವಿನಿ ವಿದ್ಯೆ ಕಲಿತು ಅಲ್ಲಿಂದ ಹೊರುಡುತ್ತಾನೆ. ಆ ವೇಳೆಗಾಗಲೇ ದೇವಯಾನಿ ಅವನನ್ನು ಪ್ರೀತಿಸಲು ಆರಂಭಿಸಿದ್ದಳು. ಅವನನ್ನು ಮದುವೆಯಾಗಬಯಸಿದಳು. ಆದರೆ ಆತ ತಾನು ಆಕೆಯ ಜೊತೆ ಸೋದರನಂತೆ ಬೆಳೆದಿರುವುದಾಗಿ ಹೇಳಿ ಆಕೆಯನ್ನು ತಿರಸ್ಕರಿಸಿದಾಗ ಅವನು ಕಲಿತ ಮೃತಸಂಜೀವಿನಿ ವಿದ್ಯೆ ಆತನ ಪ್ರಯೋಜನಕ್ಕೆ ಬಾರದಿರಲಿ ಎಂದು ಶಾಪವಿತ್ತಳು. ಆಗ ಕೆರಳಿದ ಕಚನು , " ಯಾವ ಋಷಿಪುತ್ರನೂ ನಿನ್ನ ಕೈ ಹಿಡಿಯದಿರಲಿ, ನನಗೆ ವಿದ್ಯೆಯ ಫಲ ಸಿಕ್ಕದಿದ್ದರೂ ನಾನು ಹೇಳಿಕೊಡುವ ಶಿಷ್ಯರಿಗೆ ಆ ಸಂಪತ್ತು ಲಭಿಸುವಂತಾಗಲಿ" ಎಂದು ಹೇಳಿದ.
ಕಚನ ಶಾಪದಂತೆ ದೇವಯಾನಿ ಬ್ರಾಹ್ಮಣನನ್ನು ಬಿಟ್ಟು ಕ್ಷತ್ರಿಯನಾದ ಯಯಾತಿಯನ್ನು ಮದುವೆಯಾಗಬೇಕಾಯಿತು. ಮೃತಸಂಜೀವಿನಿಯಿಂದ ಕಚನಿಗೆ ಏನೂ ಪ್ರಯೋಜನವಾಗದಿದ್ದರೂ ಆದಿ ಪವದಲ್ಲಿ ಅವನು ಈ ವಿದ್ಯೆಯನ್ನು ದೇವತೆಗಳಿಗೆ ಕಲಿಸಿಕೊಟ್ಟನು.
No comments:
Post a Comment