ಏಕಪಾದ ಮತ್ತು ಸುಜಾತೆಯರ ಮಗನೇ ಅಷ್ಟಾವಕ್ರ. ದೇಹದ ಎಂಟು ಅಂಗಗಳಲ್ಲಿ ವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ್ದರಿಂದ ಅಷ್ಟಾವಕ್ರನೆಂದು ಪ್ರಖ್ಯಾತನಾದ. ಏಕಪಾದರಿಗೆ ಖದೋರ ಎಂಬ ಹೆಸರು ಇದ್ದು ಅವರು ಸದಾ ವಿದ್ಯಾರ್ಥಿಗಳನ್ನು ವೇದಪಾಠ ಕಲಿಯುವಂತೆ ಒತ್ತಾಯಿಸುತ್ತಿದ್ದುದು ತಾಯಿಯ ಗರ್ಭದಲ್ಲಿದ್ದ ಅಷ್ಟಾವಕ್ರನಿಗೆ ಸರಿಬರದೆ ಅಪ್ಪನನ್ನು ಅಪೇಕ್ಷಿಸುತ್ತದೆ. ಇದರಿಂದ ಕೆರಳಿದ ಅಪ್ಪ, " ನೀನು ವಕ್ರವಾಗಿ ಮಾತಾಡಿದ್ದೀಯೆ ಆದ್ದರಿಂದ ಅಷ್ಟಾವಕ್ರನಾಗಿ ಹುಟ್ಟು" ಎಂದು ಶಾಪವಿತ್ತ. ನಂತರ ಮಗನನ್ನು ಸಾಕಲು ಹೆಣಗಬೇಕೆಂದು ಏಕಪಾದನು ಜನಕನ ಆಸ್ಥಾನಕ್ಕೆ ಹೋಗಿ ಅಲ್ಲಿ ವಾದದಲ್ಲಿ ಸೋತು ನೀರಿನಲ್ಲಿ ಮುಳುಗಿ ಸತ್ತ. ಮುಂದೆ ಉದ್ದಾಲಕರಲ್ಲಿ ವಿದ್ಯಾಭ್ಯಾಸ ಮುಗಿಸಿದ ಅಷ್ಟಾವಕ್ರನು ತನ್ನ ತಂದೆಗೆ ಬಂದ ಪಾಡನ್ನು ತಿಳಿದು ತನ್ನ ಸ್ನೇಹಿತ ಉದ್ದಾಲಕರ ಮಗನಾದ ಶ್ವೇತಕೇತುವಿನ ಜೊತೆಗೆ ಮಿಥಿಲೆಗೆ ಹೋದ. ಅಲ್ಲಿ ದೊಡ್ಡ ದೊಡ್ಡ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ, ನಂತರ ವರುಣನ ಪುತ್ರನಾದ ನಂದಿಯ ಜೊತೆ ವಾದಕ್ಕೆ ಇಳಿದು ಅವನನ್ನು ಸೋಲಿಸಿದ. ನಂದಿ ಸೋತ ಕಾರಣ ಅವನಿಗೆ ನೀರಿನಲ್ಲಿ ಮುಳುಗುವುದು ಅನಿವಾರ್ವಾಯಯಿತು.ಅವನು ನೀರಿನಲ್ಲಿ ಮುಳುಗಿದ ತಕ್ಷಣ ಅಷ್ಟಾವಕ್ರನ ತಂದೆಯಾದ ಏಕಪಾದನು ಬದುಕಿ ಬಂದ. ಹೀಗೆ ತನ್ನ ತಂದೆಯನ್ನು ಉಳಿಸಿಕೊಂಡು, ಸಮುದ್ದದೊಳಗಿದ್ದ ಬಂಧಿಗಳನ್ನು ಬಿಡಿಸಿಕೊಂಡು ಊರಿಗೆ ಹಿಂತಿರುಗಿದರು.
ಅಷ್ಟಾವಕ್ರನ ಬಗೆಗೆ ಬ್ರಹ್ಮವೈವರ್ಪುತಪುರಾಣ ಬೇರೆ ರೀತಿಯಲ್ಲಿ ಹೇಳುತ್ತದೆ. ಅಸಿತನ ಮಗ ದೇವಲ. ಅವನನ್ನು ಕಂಡು ರಂಭೆ ಮೋಹಿಸುತ್ತಾಳೆ. ಆದರೆ ಅವಳನ್ನು ಅವನು ತಿರಸ್ಕರಿಸಿದಾಗ ಅಷ್ಟಾವಕ್ರನಾಗುವಂತೆ ಶಾಪವಿತ್ತಳು. ಮುಂದೆ ಶ್ರೀಕೃಷ್ಣ-ರಾಧೆಯರು ಇವನ ಎದಯರಿಗೆ ನಿಂತಾಗ ಶ್ರೀಕೃಷ್ಣನ ಆಲಿಂಗನದಿಂದ ಅಷ್ಟಾವಕ್ರತ್ವ ಹೋಗಿ ದೇವಲನು ಸುಂದರ ಪುರುಷನಾದ ಎಂದು ತಿಳಿಸುತ್ತದೆ.
ಅಗ್ನಿಪುರಾಣದ ಪ್ರಕಾರ ಈ ಅಷ್ಟಾವಕ್ರನ ದೇಹದ ಕುರೂಪತೆಯನ್ನು ಕಂಡು ರಂಭೆ ಮೊದಲಾದ ಅಪ್ಸರೆಯರು ನಕ್ಕರಂತೆ. ಈ ತಪ್ಪಿಗಾಗಿ ಅವರು ಮುಂದೆ ಕೃಷ್ಣ ಪತ್ನಿಯಾರಾಗಿ ಕೃಷ್ಣನ ಮರಣಾನಂತರ ಬೇಡರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಎನ್ನುತ್ತದೆ.
ಗ್ರಂಥ ಋಣ: ಮಹಾಭಾರತದ ಪಾತ್ರ ಸಂಗತಿಗಳು, ಅ.ರಾ. ಮಿತ್ರ.

No comments:
Post a Comment